ವರ್ತೂರು-ತನಿಷಾ ಕುಪ್ಪಂಡ ಮದುವೆ ಆಗ್ತಾರಾ? ನೇರವಾಗಿ ಉತ್ತರಿಸಿದ ಸಂತೋಷ್

ವರ್ತೂರು ಸಂತೋಷ್​ ಮತ್ತು ತನಿಷಾ ಕುಪ್ಪಂಡ ಮದುವೆ ಆಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹೇಳಿತ್ತಾ ಇರುತ್ತಾರೆ. ಆ ಬಗ್ಗೆ ವರ್ತೂರು ಸಂತೋಷ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಜನರ ಅಭಿಪ್ರಾಯಕ್ಕೆ ನಾವು ಗೌರವ ಕೊಡಬೇಕು. ಮದುವೆ ಸಾಧ್ಯವಿಲ್ಲ. ನಮ್ಮದು ಅವಿಭಕ್ತ ಕುಟುಂಬ ಆಗಿತ್ತು. ನಮ್ಮ ಸಂಪ್ರದಾಯಗಳು ಜಾಸ್ತಿ. ಸ್ನೇಹಕ್ಕೆ ಬೆಲೆ ಕಟ್ಟೋಕೆ ಆಗಲ್ಲ. ವೈಯಕ್ತಿಕ ಜೀವನಕ್ಕೂ ಸಾರ್ವಜನಿಕ ಜೀವನಕ್ಕೂ ತುಂಬ ವ್ಯತ್ಯಾಸ ಇದೆ. ಹಿರಿಯರು ಹೇಳಿದ ತೀರ್ಮಾನಕ್ಕೆ ನಾನು ಕಟ್ಟುಬಿದ್ದಿದ್ದೇನೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ.