ಹುಬ್ಬಳ್ಳಿಯಲ್ಲಿ ರಸ್ತೆಗೆ ಬಿದ್ದ ಬೃಹತ್ ಕಂಬ, ತಪ್ಪಿದ ಭಾರೀ ದುರಂತ

ಬೃಹದಾಕಾರದ ಕಬ್ಬಿಣದ ಕಂಬವೊಂದು ರಸ್ತೆ ಮೇಲೆ ಬಿದ್ದ ಘಟನೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಬಳಿಯ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ. ಅದೃಷ್ಟವಶಾತ್, ವಾಹನ ಸವಾರರು ಕೂದಲಳೆಯ ಅಂತರದಲ್ಲಿ ಬಲುದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.