ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ಸೀಟು ಹೊಂದಾಣಿಕೆ ಬಗ್ಗೆ ಮಾತುಕತೆಗೆ ಕೂತಾಗ ತಾವು ಬೇಡಿಕೆ ಇಟ್ಟಿದ್ದು ಕೇವಲ 3-4 ಸೀಟುಗಳಿಗೆ ಮಾತ್ರ. ತಮ್ಮ ಸಾಮರ್ಥ್ಯದ ಬಗ್ಗೆ ಸಂಪೂರ್ಣ ಅರಿವಿದೆ ಮತ್ತು ಬಿಜೆಪಿಗೂ ಅದು ಗೊತ್ತಿದೆ. ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದರೂ ಗೆಲ್ಲುತ್ತದೆ. ಕೇವಲ ಎರಡು ಸೀಟುಗಳಿಗಾಗಿ ತಾನು ಇಷ್ಟೆಲ್ಲ ಪ್ರಯತ್ನ, ಹೋರಾಟ ಮಾಡಬೇಕಿತ್ತೇ? ಎಂದು ಕುಮಾರಸ್ವಾಮಿ ಬೇಸರದಲ್ಲಿ ಪ್ರಶ್ನಿಸಿದರು.