ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಕಚೇರಿಯಲ್ಲಿ ಕಳ್ಳರ ಕೈಚಳಕ

ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ತೆಂಗಿನಕಾಯಿ ಅವರ ಕಚೇರಿಯಲ್ಲಿ ಮಾರ್ಚ್ 16 ರಂದು ಕಳ್ಳತನ ನಡೆದಿದೆ. ಜೆ.ಸಿ. ನಗರದ ಟೌನ್ ಹಾಲ್ ಕಟ್ಟಡದಲ್ಲಿರುವ ಕಚೇರಿಯ ಹಿಂಬಾಗಿಲ ಮೂಲಕ ಖದೀಮರು ನುಗ್ಗಿ ಟಿವಿ ಸೇರಿದಂತೆ ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಹುಬ್ಬಳ್ಳಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.