‘ಬಾಯೇ ಮುಚ್ಚಲ್ವಲ್ಲ ಗುರು, ಅವಳು ಯಾರು ಡಾಮಿನೇಟ್ ಮಾಡೋಕೆ’ ತನಿಷಾ ಮೇಲೆ ನಮ್ರತಾ ಕೋಪ

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ತನಿಷಾ ಹಾಗೂ ನಮ್ರತಾ ಮಧ್ಯೆ ಘನಘೋರ ಜಗಳ ನಡೆದಿದೆ. ತನಿಷಾ ಡಾಮಿನೇಟ್ ಮಾಡುತ್ತಾರೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಇದೇ ವಿಚಾರಕ್ಕೆ ತನಿಷಾ ವಿರುದ್ಧ ನಮ್ರತಾ ಕೋಪಗೊಂಡಿದ್ದಾರೆ. ‘ಒಂದು ನಿಮಿಷನೂ ಅವಳು ಬಾಯೇ ಮುಚ್ಚಲ್ವಲ್ಲ. ಎಲ್ಲರ ಮೇಲೆ ಡಾಮಿನೇಟ್ ಮಾಡೋಕೆ ಅವಳು ಯಾರು’ ಎಂದು ನಮ್ರತಾ ಕೂಗಾಡಿದ್ದಾರೆ. ಮನೆಯವರು ನಮ್ರತಾನ ಸಮಾಧಾನ ಮಾಡೋಕೆ ಹೋದರೂ ಅದು ಸಾಧ್ಯವಾಗಲೇ ಇಲ್ಲ. ವೀಕೆಂಡ್ ಎಪಿಸೋಡ್ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಹಾಗೂ ಲೈವ್ ವೀಕ್ಷಿಸಲು ಅವಕಾಶ ಇದೆ.