ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವಾಗ, ತಾವು ದಕ್ಷಿಣ ಆಫ್ರಿಕಾ ಮತ್ತು ನಂತರ ಗ್ರೀಸ್ ನಲ್ಲಿದ್ದರೂ ತಮ್ಮ ಮನಸ್ಸು ಮಾತ್ರ ಇಸ್ರೋ ವಿಜ್ಞಾನಿಗಳೊಂದಿಗಿತ್ತು, ಹಾಗಾಗಿ ಭಾರತಕ್ಕೆ ಬಂದ ಕೂಡಲೇ ಅಮೋಘ ಸಾಧನೆ ಮಾಡಿದ ವಿಜ್ಞಾನಿಗಳ ದರ್ಶನಕ್ಕೆ ಮತ್ತು ಅವರನ್ನು ವಂದಿಸುವುದಕ್ಕೆ ಮನಸ್ಸು ಇನ್ನಿಲ್ಲದಂತೆ ಹಾತೊರೆಯುತಿತ್ತು ಎಂದು ಪ್ರಧಾನಿ ಮೋದಿ ಭಾವುಕರಾಗಿ ಗದ್ಗದಿತ ಧ್ವನಿಯಲ್ಲಿ ಹೇಳಿದರು.