ರಾಜಕಾರಣಿಗಳು ಗೆದ್ದ ಬಳಿಕ ಏನು ಮಾಡಬೇಕು ಎಂಬುದನ್ನು ಹೇಳಿದ ಯಶ್

ನಟ ಯಶ್ ಅವರು ‘ಕೆಜಿಎಫ್ 2’ ಬಳಿಕ ವಿಶ್ವಾದ್ಯಂತ ಗುರುತಿಸಿಕೊಂಡಿದ್ದಾರೆ. ಅವರು ಮೇ 10ರಂದು ಮತದಾನಕ್ಕೆ ಬಂದಿದ್ದರು. ವೋಟ್ ಹಾಕಿ ಅವರು ಮಾಧ್ಯಮದ ಜೊತೆ ಮಾತನಾಡಿದರು. ಈ ವೇಳೆ ಅವರಿಗೆ ವಿವಿಧ ರೀತಿಯ ಪ್ರಶ್ನೆಗಳು ಎದುರಾದವು. ರಾಜಕೀಯ ಪಕ್ಷಗಳ ಬಗ್ಗೆಯೂ ಅವರಿಗೆ ಪ್ರಶ್ನೆ ಮಾಡಲಾಯಿತು. ‘ರಾಜಕಾರಣಿಗಳು ಇರಬಹುದು, ರಾಜಕೀಯ ನಾಯಕರು ಇರಬಹುದು. ಬೇಸಿಕ್ ಕೆಲಸಗಳನ್ನು ಮೊದಲು ಮಾಡಬೇಕು. ಮೂಲಸೌಕರ್ಯಗಳನ್ನು ನೀಡಬೇಕು’ ಎಂದು ಯಶ್ ಹೇಳಿದ್ದಾರೆ.