ಪಿಸಿ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ

ಕೇರಳದಲ್ಲಿ ಜೆಎನ್.1 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆ ರಾಜ್ಯಕ್ಕೆ ಹೊಂದಿಕೊಂಡಿರುವಂಥ ಹೆಚ್ ಡಿ ಕೋಟೆ ತಾಲ್ಲೂಕಿನಲ್ಲಿ 3—4 ಆರೋಗ್ಯಾಧಿಕಾರಿಗಳಿರುವ ತಂಡಗಳನ್ನು ರಚಿಸಿ ಪರಿಸ್ಥಿತಿಯನ್ನು ಮಾನಿಟರ್ ಮಾಡಲು ಹೇಳಲಾಗಿದೆ ಎಂದು ಮೈಸೂರು ಡಿಹೆಚ್ ಓ ಕುಮಾರಸ್ವಾಮಿ ಹೇಳಿದರು. ಸುರಕ್ಷಿತ ಅಂತರ, ಮೂರು ಲೇಯರ್ ಉಳ್ಳ ಮಾಸ್ಕ್ ಧರಿಸುವುದು, ಪದೇಪದೆ ಕೈತೊಳೆಯುವುದು ಮತ್ತು ಕಾದಾರಿದ ನೀರನ್ನು ಕುಡಿಯುವಂತೆ ಜನರಿಗೆ ತಿಳಿಸಲಾಗುತ್ತಿದೆ ಎಂದು ಅವರು ಹೇಳಿದರು.