‘ಸಿನಿಮಾ ಮನಸ್ಸಿಗೆ ಬಹಳ ಹತ್ತಿರ ಆಗುತ್ತದೆ’; ‘ಟಗರು ಪಲ್ಯ’ ಚಿತ್ರಕ್ಕೆ ಸಾನ್ಯಾ ಅಯ್ಯರ್ ಮೆಚ್ಚುಗೆ

‘ಬಿಗ್ ಬಾಸ್ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮೂಲಕ ಸಾನ್ಯಾ ಅಯ್ಯರ್ ಅವರು ಫೇಮಸ್ ಆದರು. ಅವರು ತಾಯಿಯ ಜೊತೆ ‘ಟಗರು ಪಲ್ಯ’ ಸಿನಿಮಾ ವೀಕ್ಷಿಸಿದ್ದಾರೆ. ನಾಗಭೂಷಣ್, ರಂಗಾಯಣ ರಘು, ತಾರಾ ಅನುರಾಧಾ, ಅಮೃತಾ ಮೊದಲಾದವರು ನಟಿಸಿರುವ ಈ ಸಿನಿಮಾಗೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಸಾನ್ಯಾ ಅಯ್ಯರ್ಗೂ ಸಿನಿಮಾ ಇಷ್ಟ ಆಗಿದೆ. ‘ಸಿನಿಮಾ ಮನಸ್ಸಿಗೆ ಬಹಳ ಹತ್ತಿರ ಆಗುತ್ತದೆ. ಹಳ್ಳಿಯ ಜೀವನದ ಎಷ್ಟು ಚೆಂದ ಅನ್ನೋದು ಗೊತ್ತಾಗುತ್ತದೆ’ ಎಂದಿದ್ದಾರೆ ಸಾನ್ಯಾ ಅಯ್ಯರ್.