D.K.Shivakumar: ಮಾಧ್ಯಮಗೋಷ್ಠಿ ಮಧ್ಯೆ ಮೊಬೈಲ್​ಗೆ ಅಲರ್ಟ್ ಮೆಸೇಜ್-ಅದರಲ್ಲೇ ಎದುರಾಳಿಗಳಿಗೆ DK ಟಾಂಗ್

ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಭಾಷಣ ಮಾಡುತ್ತಿದ್ದ ವೇಳೆ ವಿಕೋಪ ಅಲರ್ಟ್ ಟ್ರಯಲ್ ಮೆಸೇಜ್ ಮತ್ತು ಬೀಪ್​ ಸೌಂಡ್ ಬಂದಿದೆ. ಏಕಕಾಲಕ್ಕೆ ಹತ್ತಾರು ಮೊಬೈಲ್​ಗಳು ಸದ್ದು ಮಾಡಿದ ಹಿನ್ನೆಲೆ ಕಾಂಗ್ರೆಸ್ ನಾಯಕರು ಕೆಲಕಾಲ ಗಲಿಬಿಲಿಗೊಂಡರು. ಆಗ ಮಾಧ್ಯಮಪ್ರತಿನಿಧಿಗಳು, ಈ ಶಬ್ದ ವಿಕೋಪ ಮಾಹಿತಿ ಅಲಾರ್ಮ್ ಎಂದು ತಿಳಿಸಿದ್ದು ಕಾಂಗ್ರೆಸ್ ನಾಯಕರು ನಿಟ್ಟುಸಿರುಬಿಟ್ಟರು. ಈ ವೇಳೆ ಭಾಷಣ ಮಾಡುತ್ತಿದ್ದ ಡಿಕೆ ಶಿವಕುಮಾರ್ ಅವರು, ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ ಎಂದು ನಗೆಚಟಾಕಿ ಹಾರಿಸಿದರು.