ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ

ದಾವಣಗೆರೆ ಮೂಲಕ ಹಾದುಹೋಗುವ ಹೆದ್ದಾರಿಯನ್ನು ಪ್ರತಿಭಟನೆಕಾರರು ಅಡ್ಡಗಟ್ಟಿ ವಾಹನಗಳ ಸಂಚಾರವನ್ನು ತಡೆದಾಗ ಪೊಲೀಸರು ಹೆದ್ದಾರಿಯನ್ನು ತೆರವುಗೊಳಿಸಲು ಧಾವಿಸುತ್ತಾರೆ. ಆಗಲೇ ಭದ್ರಾ ಬಲದಂಡೆ ಕಾಲುವೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ರೈತ ಮುಖಂಡರ ನಡುವೆ ಗಲಾಟೆ ಶುರುವಾಗುತ್ತದೆ. ಕೆಲವರನ್ನು ಪೊಲೀಸರು ವಶಕ್ಕೂ ಪಡೆಯುತ್ತಾರೆ.