ಬೆಂಗಳೂರಿನಲ್ಲಿ ವಾಯುಪಡೆ ಅಧಿಕಾರಿ ಬೋಸ್ ಮತ್ತು ಟೆಕ್ಕಿ ವಿಕಾಸ್ ಕುಮಾರ್ ನಡುವೆ ನಡೆದ ಹಲ್ಲೆಯ ಪ್ರಕರಣಕ್ಕೆ ಸಿಸಿಟಿವಿ ದೃಶ್ಯಗಳು ಟ್ವಿಸ್ಟ್ ನೀಡಿವೆ. ಆರಂಭದಲ್ಲಿ ಅಧಿಕಾರಿ ಮೇಲೆ ಹಲ್ಲೆ ಎಂದು ದೂರು ದಾಖಲಾಗಿತ್ತು. ಆದರೆ, ಸಿಸಿಟಿವಿ ಫೂಟೇಜ್ ಅಧಿಕಾರಿಯೇ ಟೆಕ್ಕಿ ಮೇಲೆ ಹಲ್ಲೆ ಮಾಡಿರುವುದನ್ನು ತೋರಿಸಿದೆ. ಭಾಷಾ ವಿವಾದ ಎಂದು ಹೇಳಲಾಗುತ್ತಿದ್ದರೂ, ಸತ್ಯಾಂಶ ಬೇರೆ ಇದೆ ಎಂದು ಸಿಸಿಟಿವಿ ಬಹಿರಂಗಪಡಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.