ವಿಜಯಪುರ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬರುತ್ತಿದೆ, ರೈತನಿಗೆ ಖುಷಿ!

ಬರದ ನಾಡು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡ ಜಿಲ್ಲೆ ವಿಜಯಪುರ. ಆಲಮಟ್ಟಿ ಡ್ಯಾಂ ಇದ್ದರೂ ಜಲ ವಿವಾದದ ಕಾರಣ ಇನ್ನೂ ಸಂಪೂರ್ಣವಾಗಿ ನೀರಾವರಿ ಮಾಡಿಕೊಂಡು ನೀರನ್ನು ಬಳಕೆ ಮಾಡಿಕೊಳ್ಳದಂತಾಗಿದೆ. ಪ್ರತಿ ವರ್ಷ ಇಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ. ಕೆಲವೊಮ್ಮೆ ಪ್ರವಾಹವನ್ನೇ ಸೃಷ್ಟಿಸಿ ಎಲ್ಲವನ್ನೂ ಆಪೋಷಣ ತೆಗೆದುಕೊಳ್ಳುತ್ತದೆ. ಇಷ್ಟರ ಮಧ್ಯೆ ಕೃಷಿಯನ್ನೇ ನಂಬಬಿದ್ದಾರೆ ಹೆಚ್ಚಿನ ಜನರು. ಈ ಬಾರಿಯೂ ಮಳೆಯ ಪ್ರಮಾಣ ಕಡಿಮೆಯಾದರೂ ರೈತರು ಆತಂಕ ಪಡುತ್ತಿಲ್ಲಾ. ಕಾರಣ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಕೆರೆಗಳಿಗೆ ನೀರು ಭರಿಸೋ ಕಾರ್ಯದಿಂದ ಜನ ಜಾನುವಾರುಗಳಿಗೆ ಹಿಡಿದು ಕೃಷಿಗೂ ಅನಕೂಲವಾಗಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ....