ವಿಜಯಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೋರ್ಡಿಂಗ್​ಗಳು

ಬಿಜೆಪಿ ಸಮಾವೇಶವನ್ನು ಇಂದು ಸಾಯಂಕಾಲ 4 ಗಂಟೆಗೆ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ. ನಿನ್ನೆ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ಅಲ್ಲಲ್ಲಿ ನೀರು ನಿಂತಿದೆ. ಸಾಯಂಕಾಲದ ಹೊತ್ತಿಗೆ ನೀರೆಲ್ಲ ಬತ್ತಿ ಹೋಗಲಿದೆ, ಆದರೆ ಇವತ್ತು ಸಾಯಂಕಾಲ ಮಳೆಯಾಗದಿದ್ದರೆ ಸಾಕು. ಸಮಾವೇಶ ಪ್ರಚಂಡ ಯಶ ಕಾಣಲು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶ್ರಮಿಸುತ್ತಿದ್ದಾರೆ.