ಅಂಬೇಡ್ಕರ್ ಜಯಂತಿ ಹಿನ್ನೆಲೆ ಆನೇಕಲ್ ಒಂದು ವಿಶೇಷ ಮದುವೆಗೆ ಸಾಕ್ಷಿಯಾಗಿದೆ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಕಿರಣ್ ಮತ್ತು ಪ್ರಿಯಾಂಕ, ಕುಟುಂಬದ ವಿರೋಧದ ಹೊರತಾಗಿಯೂ, ಅಂಬೇಡ್ಕರ್ ಜಯಂತಿಯಂದು ಸರಳವಾಗಿ ವಿವಾಹವಾಗಿದ್ದಾರೆ. ಸಂವಿಧಾನ ಪೀಠಿಕೆ ಮತ್ತು ಪಂಚಶೀಲವನ್ನು ಪಠಿಸುವ ಮೂಲಕ ಗಣ್ಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು.