ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ

ಬಿಗ್​ಬಾಸ್ ಮನೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎರಡು ದಿನಕ್ಕೆ ಮುಂಚೆಯೇ ಶುರುವಾಗಿದೆ. ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಆಕ್ಟಿವಿಟಿ ಒಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳು ತಮ್ಮದಾದ ವಸ್ತುವೊಂದನ್ನು ತಮ್ಮ ಪ್ರೀತಿ ಪಾತ್ರರಿಗೆ ನೀಡಬೇಕಿತ್ತು, ಹಲವರು ತಮ್ಮ ವಸ್ತುಗಳನ್ನು ಇತರ ಸ್ಪರ್ಧಿಗಳಿಗೆ ನೀಡಿದರು. ಚೈತ್ರಾ ಅವರು, ಐಶ್ವರ್ಯಾಗೆ ವಸ್ತುವೊಂದನ್ನು ಕೊಟ್ಟರು, ಇದು ಮನೆಯಲ್ಲಿ ಭಾವುಕ ಸನ್ನಿವೇಶ ಸೃಷ್ಟಿಸಿತು. ಅದಾದ ಬಳಿಕ ಎಲ್ಲರ ನಿರೀಕ್ಷೆಯಂತೆ ಭವ್ಯಾ ಗೌಡ, ತಮ್ಮ ಆತ್ಮೀಯ ಗೆಳೆಯ ತ್ರಿವಿಕ್ರಮ್​ಗೆ ವಸ್ತುವೊಂದನ್ನು ಉಡುಗೊರೆಯಾಗಿ ನೀಡಿದರು. ಆ ನಂತರ ತ್ರಿವಿಕ್ರಮ ಅವರ ಗುಣವನ್ನು ಹೊಗಳಿ ಕೊಂಡಾಡಿದರು. ಇದನ್ನು ಕೇಳಿ ಸುದೀಪ್ ಜೋಕ್ ಮಾಡಿದರು. ಅದು ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿತು.