ಕೆಡಿಪಿ ಸಭೆಯಲ್ಲಿ ಶಾಸಕ ಸತೀಶ್ ಸೈಲ್

ಶಾಸಕರು ಮತ್ತು ಮಂತ್ರಿಗಳು ತಮ್ಮ ಬೇಸರ, ಕೋಪ ಮತ್ತು ಅಸಮಾಧಾನ ಹೊರಹಾಕಲು ಕೆಡಿಪಿ ಇಲ್ಲವೇ ದಿಶಾ ಸಭೆಗಳನ್ನು ಬಳಸುವುದು ವಿಷಾದನೀಯ. ಅವರ ಕೋಪ ತಾಪಗಳಿಗೆ ಅಧಿಕಾರಿಗಳು ಬಲಿಪಶುವಾಗುತ್ತಿರುವುದು ಮತ್ತಷ್ಟು ಶೋಚನೀಯ. ಹಾಗೆ ನೋಡಿದರೆ ತಮ್ಮ ಅಸಮಾಧಾನಗಳನ್ನು ಹೇಳಿಕೊಳ್ಳಲು ಜನಪ್ರತಿನಿಧಿಗಳಿಗೆ ಪಕ್ಷದ ವೇದಿಕೆ ಮತ್ತು ಮಾಧ್ಯಮಗಳಿವೆ.