ಯತ್ನಾಳ್ ಬಳಸಿದ ಭಾಷೆಯನ್ನು ಅನುಕರಿಸುವ ಗೋಜಿಗೆ ಶಿವಾನಂದ ಪಾಟೀಲ್ ಹೋಗಿಲ್ಲ. ಅವರು ಸುಸಂಸ್ಕೃತ ಭಾಷೆಯಲ್ಲ್ಲಿ ಪಂಥಾಹ್ವಾನ ಸ್ವೀಕರಿಸಿದ್ದನ್ನು ಹೇಳುತ್ತಾರೆ, ಏಕವಚನದಲ್ಲೂ ಮಾತಾಡಿಲ್ಲ. ರಾಜೀನಾಮೆ ಸಲ್ಲಿಸಿರುವ ವಿಚಾರ ತೀರ ವೈಯಕ್ತಿಕವಾದದ್ದು, ಮುಖ್ಯಮಂತ್ರಿಯವರಿಗಾಗಲೀ ಅಥವಾ ಪಕ್ಷದ ವರಿಷ್ಠರಿಗಾಗಲೀ ವಿಷಯ ಹೇಳಿಲ್ಲ ಎಂದು ಅವರು ಹೇಳಿದರು. ರಾಜ್ಯ ರಾಜಕಾರಣದಲ್ಲಿ ಇದು ಅನಿರೀಕ್ಷಿತ ಬೆಳವಣಿಗೆ.