ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಕುಮಾರಸ್ವಾಮಿಗೆ ತಲೆ ನೋವು ತಂದಿದೆ. ತನ್ನ ಅಣ್ಣನ ಮಗನ ಕೃತ್ಯಗಳನ್ನು ನಿರಾಕರಿಸದ ಕುಮಾರಸ್ವಾಮಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳುತ್ತಿದ್ದಾರೆ. ಹಾಗೆಯೇ, ಬಿಜೆಪಿ ಜೊತೆಗಿನ ಮೈತ್ರಿ ಅಪಾಯದಲ್ಲಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಕುಮಾರಸ್ವಾಮಿ, ತಮಗೆ ಬಿಜೆಪಿ ಮೈತ್ರಿ ಮುಖ್ಯ ಅಲ್ಲ. ಮೊದಲು ಪ್ರಜ್ವಲ್ ಪ್ರಕರಣ ಇತ್ಯರ್ಥ ಆಗಲಿ ಎಂದಿದ್ದಾರೆ.