ಸತತ 4 ಗಂಟೆ ಕಾಲ ನಡೆದ ಪ್ರಜ್ವಲ್ ಸ್ಥಳ ಮಹಜರು ಪ್ರಕ್ರಿಯೆ ಅಂತ್ಯ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್​ನ ತನಿಖೆ ಚುರುಕುಗೊಂಡಿದೆ. ಇವತ್ತು ಹಾಸನದ ಹೊಳೆನರಸೀಪುರದಲ್ಲಿರೋ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ಮುಗಿಸಿದೆ. ಡಿವೈಎಸ್​ಪಿ ಸತ್ಯನಾರಾಯಣ ನೇತೃತ್ವದಲ್ಲಿ ಎಸ್​ಐಟಿ ಅಧಿಕಾರಿಗಳು ಚೆನ್ನಾಂಬಿಕಾ ನಿವಾಸಕ್ಕೆ ಎಂಟ್ರಿಕೊಟ್ಟಿದ್ದರು. ಆರೋಪಿ ಪ್ರಜ್ವಲ್ ರೇವಣ್ಣನ ಕರೆತಂದು ಸತತ 4 ಗಂಟೆಗಳ ಕಾಲ ಚೆನ್ನಾಂಬಿಕಾ ನಿವಾಸದಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದ್ದರು.