ಉಮೇಶ್ ವನಸಿರಿ, ಸಾಲುಮರದ ತಿಮ್ಮಕ್ಕನವರ ಮಗ

ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ಕುಟುಂಬಕ್ಕೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದಾರೆ ಅಂತ ಭಾಸವಾಗುತ್ತಿದೆ, ಇದನ್ನು ನಿಲ್ಲಿಸುವಂತೆ ಉಮೇಶ್ ನೋವಿನಿಂದ ಮನವಿ ಮಾಡಿಕೊಂಡರು. ತಿಮ್ಮಕ್ಕನವರಿಗೆ ಉಸಿರಾಟದ ತೊಂದರೆಯಾಗಿದ್ದರಿಂದ ಬೇಲೂರು ಬಳಿಯಿರುವ ಬೆಳ್ಳೂರಿನಿಂದ ಅಂಬ್ಯುಲೆನ್ಸ್ ಒಂದರಲ್ಲಿ ಬೆಂಗಳೂರಿನ ಅಪೊಲ್ಲೋ ಆಸ್ಪತ್ರೆಗೆ ತರಲಾಯಿತು. ಹೃದಯದ ರಕ್ತನಾಳ ಬ್ಲಾಕ್ ಆಗಿದ್ದರಿಂದ ವೈದ್ಯರು ಸ್ಟೆಂಟ್ ಅಳಡಿಸಿದ್ದಾರೆ ಎಂದು ಉಮೇಶ್ ಹೇಳಿದರು.