ಪೇಶಾವರದಲ್ಲಿ ಲ್ಯಾಂಡಿಂಗ್ ವೇಳೆ ಸೌದಿ ಏರ್‌ಲೈನ್ಸ್‌ನ 297 ವಿಮಾನಕ್ಕೆ ಬೆಂಕಿ

297 ಪ್ರಯಾಣಿಕರಿದ್ದ ಸೌದಿ ಏರ್‌ಲೈನ್ಸ್ ವಿಮಾನ ಇಂದು (ಗುರುವಾರ) ಪಾಕಿಸ್ತಾನದ ಪೇಶಾವರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಲ್ಯಾಂಡಿಂಗ್ ಗೇರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಲ್ಯಾಂಡಿಂಗ್ ಗೇರ್‌ನಲ್ಲಿನ ಕೆಲವು ಸಮಸ್ಯೆಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.