ಡಿಕೆ ಶಿವಕುಮಾರ್ ಮನೆ ಮುಂದೆ ಮಾಜಿ ಸಚಿವ ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ ಮತ್ತು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಹಾವು-ಮುಂಗುಲಿಯ ಸಂಬಂಧ. ಯತ್ನಾಳ್ ಮತ್ತು ಶಿವಕುಮಾರ್ ನಡುವಿನ ಸಂಬಂಧ ಹೇಗೆ ಅಂತ ಜಗಜ್ಜಾಹೀರು. ದುಶ್ಮನ್ ಕಾ ದುಶ್ಮನ್ ದೋಸ್ತ್ ಅನ್ನೋ ಕಾರಣಕ್ಕೆ ನಿರಾಣಿಯವರು ಶಿವಕುಮಾರ್ ಮನೆಗೆ ಬಂದಿರಲಾರರು, ಯಾಕೆಂದರೆ ಬಿಜೆಪಿ ನಾಯಕರು ಈಗ ಯತ್ನಾಳ್ ಬಗ್ಗೆ ಮಾತು ಕೂಡ ಅಡುತ್ತಿಲ್ಲ.