ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ

ಅತಿ ವೇಗದಲ್ಲಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದಿರುವ ಘಟನೆ ಲಕ್ನೋದ ಲುಲು ಮಾಲ್ ಬಳಿ ನಡೆದಿದೆ. ಅಪಘಾತವಾದ ಬಳಿಕ ಕಾರನ್ನು ನಿಲ್ಲಿಸದೆ ಸ್ಕೂಟಿಯನ್ನು ಎಳೆದೊಯ್ದ ಪರಿಣಾಮ ಬೆಂಕಿಯ ಕಿಡಿಗಳು ಕಾಣಿಸುತ್ತಿದ್ದವು. ಚಾಲಕನನ್ನು ವಾರಣಾಸಿಯ ಎಂಜಿನಿಯರ್ ಬ್ರಜೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಖಾಸಗಿ ವಲಯದ ಉದ್ಯೋಗಿಯಾಗಿರುವ ಹಜರತ್‌ಗಂಜ್ ನಿವಾಸಿ ಮನೀಶ್ ಸಿಂಗ್ ತನ್ನ ಸಹೋದರಿ ತನು ಜೊತೆ ತೆಲಿಬಾಗ್ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.