ಅಕ್ಷರಾಭ್ಯಾಸಕ್ಕೆ ಯಾವ ದಿನ ಶುಭ ಮತ್ತು ಹೇಗೆ ಮಾಡಿಸಬೇಕು

ಮಕ್ಕಳ ಅಕ್ಷರಾಭ್ಯಾಸಕ್ಕೆ ಶುಭ ಸಮಯಗಳ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಮೂರು, ಐದು, ಏಳು ವರ್ಷಗಳಲ್ಲಿ ಅಕ್ಷರಾಭ್ಯಾಸ ಮಾಡುವುದು ಶುಭ ಎಂದು ಹೇಳಲಾಗುತ್ತದೆ. ಬುಧ, ಗುರು, ಶುಕ್ರವಾರಗಳು ಅಕ್ಷರಾಭ್ಯಾಸಕ್ಕೆ ಶುಭ ದಿನಗಳು. ಪಾಡ್ಯ, ಅಷ್ಟಮಿ, ಚತುರ್ದಶಿ, ಅಮಾವಾಸ್ಯೆ ದಿನಗಳಲ್ಲಿ ಮಾಡಬಾರದು. ಗುರುಗಳ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡುವುದು ಉತ್ತಮ.