ದರ್ಶನ್ ಅವರಿಗೆ ಜಾಮೀನು ಸಿಗಲಿ ಎಂದು ಅವರ ಪತ್ನಿ ವಿಜಯಲಕ್ಷ್ಮಿ ಅನೇಕ ದೇವರಿಗೆ ಹರಿಕೆ ಹೊತ್ತಿದ್ದರು. ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಇತ್ತೀಚೆಗೆ ದರ್ಶನ್ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಅಲ್ಲದೇ, ಮೈಸೂರಿಗೆ ಹೋಗಲು ಅನುಮತಿ ಕೂಡ ನೀಡಿತ್ತು. ಈಗ ವಿಜಯಲಕ್ಷ್ಮಿ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಹರಿಕೆ ತೀರಿಸಿದ್ದಾರೆ.