ಆಸ್ಪತ್ರೆ ಎದುರು ಅಭಿಮಾನಿಗಳಿಗೆ ಸಿಹಿ ತಿನಿಸಿದ ಧ್ರುವ ಸರ್ಜಾ

ನಟ ಧ್ರುವ ಸರ್ಜಾ ಅವರು ತಂದೆ ಆಗಿದ್ದಾರೆ. ಅವರಿಗೆ ಗಂಡು ಮಗು ಜನಿಸಿದೆ. ಈ ವಿಚಾರವನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದಾಗ ಅವರ ಅಭಿಮಾನಿಯೋರ್ವ ಸಿಹಿ ತಂದಿದ್ದರು. ಅದನ್ನು ತಿನ್ನಿಸಿ ಅವರು ಖುಷಿಪಟ್ಟಿದ್ದಾರೆ. ಸದ್ಯ ಅವರ ಪತ್ನಿ ಪ್ರೇರಣಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಸಿಹಿ ತಿನಿಸಿದ ಬಳಿಕ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘ರಾಯನ್ ನನ್ನ ಮೊದಲ ಮಗ. ಆ ಬಳಿಕ ನನಗೆ ಮಗಳು ಜನಿಸಿದಳು. ಈಗ ಮಗ ಹುಟ್ಟಿದ್ದಾನೆ’ ಎಂದು ಧ್ರುವ ಸರ್ಜಾ ಅವರು ಹೇಳಿದ್ದಾರೆ.