ಖುದ್ದು ಫೀಲ್ಡ್​ಗೆ ಇಳಿದು ಚೆಕ್​​ಪೋಸ್ಟ್​​ಗಳಲ್ಲಿ ಪರಿಶೀಲನೆ ನಡೆಸಿದ ಎಸ್​ಪಿ, ಡಿಸಿ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೆಪಾಳ್ಯ ಚೆಕ್​ಪೋಸ್ಟ್​​ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್​​ ಹಾಗೂ ಎಸ್​​ಪಿ ಅಶೋಕ್​​ ಕೆವಿ ಭೇಟಿ ನೀಡಿ ಖುದ್ದು ಕಾರು ಹಾಗೂ ಕೆಎಸ್ಆರ್​​ಟಿಸಿ ಬಸ್​ಗಳನ್ನು ತಪಾಸಣೆ ನಡೆಸಿದರು. ಪ್ರತಿಯೊಂದು ವಾಹನಗಳನ್ನು ತಪ್ಪದೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.