ಹುಬ್ಬಳ್ಳಿಯಲ್ಲಿ ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸುದ್ದಿಗೋಷ್ಠಿ ನಡೆಸಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸ್ತೀವಿ ಎಂದು ತಿಳಿಸಿದ್ದಾರೆ. ಶಾಸ್ತ್ರೋತ್ತವಾಗಿ ಎಷ್ಟು ದಿನ ಗಣೇಶ ಕೂರಿಸಬೇಕು ಅಂತ ಇದೆಯೋ ಅಷ್ಟು ದಿನ ಕೂರಿಸುತ್ತೇವೆ. ಈ ಬಗ್ಗೆ ನಾಳೆನೇ ಪಾಲಿಕೆಗೆ ಮನವಿ ಸಲ್ಲಿಸುತ್ತೇವೆ. ಗಣೇಶ ಕೂರಿಸುವಷ್ಟು ದಿನ ಅವಕಾಶಕ್ಕೆ ಮನವಿ ಮಾಡುತ್ತೇವೆ ಎಂದರು.