ಸೋಮವಾರ ಸಾಯಂಕಾಲ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಶಿಕ್ಷಕಿಯ ಮೃತದೇಹ ಪತ್ತೆಯಾಗಿದೆ. ದೀಪಿಕಾ ಕೊಲೆಯಾಗಿರಬಹುದಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪಾಂಡವಪುರ ತಾಲ್ಲೂಲು ಆಸ್ಪತ್ರೆಗೆ ಕಳಿಸಲಾಗಿದೆ. ಶವಪರೀಕ್ಷೆಯ ನಂತರವೇ ದೀಪಿಕಾ ಸಾವಿನ ನಿಖರ ಕಾರಣ ಗೊತ್ತಾಲಿದೆ.