ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಒಳಿತಿಗಾಗಿ ಹಲವರು ಧ್ವನಿ ಎತ್ತಿದ್ದಾರೆ. ಈಗಾಗಲೇ ಫೈರ್ ಸಂಸ್ಥೆಯ ಮೂಲಕ ನೂರಾರು ಜನರು ಸಹಿ ಮಾಡಿ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸಿದ ಶೋಷಣೆಗಳ ಬಗ್ಗೆ ತನಿಖೆ ನಡೆಸಲು ಒಂದು ಸಮಿತಿ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.