ಕಲಿಯುಗದ ಶ್ರವಣಕುಮಾರ: ತಾಯಿಯ ಕೂರಿಸಿ ಎತ್ತಿನ ಗಾಡಿ ಎಳೆದುಕೊಂಡು ಕುಂಭಮೇಳಕ್ಕೆ ಬಂದ ಮಗ

ಮಹಾಕುಂಭ ಮೇಳಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಟ್ರೆಂಡ್ ಆಗುತ್ತಲೇ ಇದೆ. ಹಾಗೆಯೇ ಇಲ್ಲೊಬ್ಬ ಕಲಿಯುಗದ ಶ್ರವಣಕುಮಾರರೊಬ್ಬರ ವಿಡಿಯೋ ಕೂಡ ಹರಿದಾಡಿದೆ. ಇವರು 92 ವರ್ಷ ವಯಸ್ಸಿನ ವೃದ್ಧ ತಾಯಿಯನ್ನು ಮರದ ಗಾಡಿಯಲ್ಲಿ ಕೂರಿಸಿ ತಾವೇ ಸ್ವತಃ ಗಾಡಿಯನ್ನು ಎಳೆದುಕೊಂಡು ಬಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎತ್ತಿನ ಗಾಡಿಯನ್ನು ಅವರೇ ಎಳೆಯುತ್ತಿದ್ದುದು ವಿಶೇಷವಾಗಿತ್ತು.