ಅಸಲಿಗೆ ಸೀಟು ಹಂಚಿಕೆ ವಿಷಯ ಚರ್ಚೆ ಮಾಡಲೆಂದೇ ದೇವವೇಗೌಡರ ಕುಟುಂಬ ಇವತ್ತು ದೆಹಲಿಗೆ ತೆರಳಿದೆ. ಪ್ರಾಯಶಃ ಇವರು ಇಟ್ಟಿರುವ ಬೇಡಿಕೆಯನ್ನು ಬಿಜೆಪಿ ವರಿಷ್ಠರು ಗಣನೆಗೆ ತೆಗೆದುಕೊಂಡಿರಲಾರರು. ಹಾಗಾಗೇ, ಸೀಟು ಹಂಚಿಕೆಯ ಬಗ್ಗೆ ಪತ್ರಕರ್ತರು ಕೇಳಿದರೆ ಅದು ವಿಷಯವೇ ಅಲ್ಲ ಎಂದು ಕುಮಾರಸ್ವಾಮಿ ಎಲ್ಲೋ ನೋಡುತ್ತಾ ಹೇಳುತ್ತಾರೆ.