ಬೆಕ್ಕು, ನಾಯಿಗಳ ಜನ್ಮ ದಿನಾಚರಣೆ ಮಾಡುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೀವು ನೋಡಿರುತ್ತೀರಿ. ಆದರೆ ಇತ್ತೀಚಿನ ದಿನಗಳಲ್ಲಿ ದೇವರಂತೆ ಕಾಣುವ ಹಸುಗಳ ಕರುಗಳನ್ನು ತೊಟ್ಟಿಲಿಗೆ ಹಾಕುವುದು, ನಾಮಕರಣ ಮಾಡುವ ವಿಡಿಯೋ ಕೂಡ ವೈರಲ್ ಆಗುತ್ತಿವೆ. ಹಸುಗಳ ಹುಟ್ಟುಹಬ್ಬ ಆಚರಿಸುವುದನ್ನೂ ಕಾಣುತ್ತೇವೆ. ಇದೀಗ ಕೋಲಾರದ ರೈತರೊಬ್ಬರು ಎರಡು ಹಳ್ಳಿಕಾರ್ ಹಸುಗಳ ಅದ್ದೂರಿ ಹುಟ್ಟುಹಬ್ಬ ಆಚರಿಸಿದ್ದಾರೆ.