‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಹೊಸ ಟಾಸ್ಕ್ ನೀಡಲಾಗಿದೆ. ರಾಕ್ಷಸರು ಮತ್ತು ಗಂಧರ್ವರು ಎಂದು ಎರಡು ಗುಂಪು ಮಾಡಲಾಗಿದೆ. ರಾಕ್ಷಸರು ಮಾಡಿದ ಎಲ್ಲ ಕೆಡುಕುಗಳನ್ನು ಗಂಧರ್ವರು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ವಿನಯ್ ಗೌಡ ಅವರು ಗಂಧರ್ವರ ಟೀಮ್ನಲ್ಲಿ ಇದ್ದಾರೆ. ರಾಕ್ಷಕರ ಟೀಮ್ನಲ್ಲಿ ಇರುವ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಮುಂತಾದವರು ಮಾಡಿದ ಕಿರಿಕ್ಗಳನ್ನು ವಿನಯ್ ಗೌಡ ಮುಂತಾದವರು ಸಹಿಸಿಕೊಳ್ಳಬೇಕಾಗಿದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ಅವರು ತಲುಪಿದ್ದಾರೆ. ಈ ಸಂಚಿಕೆ ಡಿಸೆಂಬರ್ 5ರಂದು ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಬಿತ್ತರ ಆಗಲಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಲೈವ್ ನೋಡಬಹುದು.