ಪತ್ನಿ ಮಾನಸಾ ಬಗ್ಗೆ ನೆಗೆಟಿವ್ ಟ್ರೋಲ್; ನೇರವಾಗಿ ಪ್ರತಿಕ್ರಿಯೆ ನೀಡಿದ ಸಂತೋಷ್

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಿಂದ ಹೊರಬಂದಿರುವ ಮಾನಸಾ ಅವರು ಸಂದರ್ಶನ ನೀಡಿದ್ದಾರೆ. ಅವರ ಜೊತೆ ಪತಿ ತುಕಾಲಿ ಸಂತೋಷ್ ಕೂಡ ಭಾಗಿ ಆಗಿದ್ದಾರೆ. ದೊಡ್ಮನೆಯಲ್ಲಿ ಇದ್ದಾಗ ಮಾನಸಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಅಂತಹ ನೆಗೆಟಿವ್ ಟ್ರೋಲ್​ಗಳ ಬಗ್ಗೆ ತುಕಾಲಿ ಸಂತೋಷ್​ ಪ್ರತಿಕ್ರಿಯೆ ನೀಡಿದ್ದಾರೆ.