ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಅವರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಬಿಗ್ ಬಾಸ್ಗೆ ಬರುವುದಕ್ಕೂ ಮೊದಲೇ ಇಬ್ಬರ ಮಧ್ಯೆ ಪರಿಚಯ ಇತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಪಾರ್ಟ್ನರ್ ಇನ್ ಕ್ರೈಮ್ ಆಗಿದ್ದಾರೆ. ವಿನಯ್ ಹಾಗೂ ಕಾರ್ತಿಕ್ ಅವರು ಲೈಟ್ ಆಫ್ಗೂ ಮುನ್ನ ನಿದ್ದೆ ಮಾಡಿದ್ದಾರೆ. ಇದರಿಂದ ಇಬ್ಬರೂ ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ಮನೆಯ ಎಲ್ಲಾ ಸದಸ್ಯರು ಇವರ ಮುಖಕ್ಕೆ ನೀರು ಎರಚಿದ್ದಾರೆ. ಸದ್ಯ ಈ ಪ್ರೋಮೋ ಎಲ್ಲರ ಗಮನ ಸೆಳೆದಿದೆ.