ಕಿರುತೆರೆ ನಟಿ ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಗಳಗಳನೆ ಅತ್ತಿದ್ದಾರೆ. ಅವರ ಕಣ್ಣೀರಿಗೆ ಕಾರಣ ಆಗಿರುವುದು ಖಾರವಾದ ಮಾತುಗಳು. ಅಳುತ್ತಾ ಕುಳಿತ ಐಶ್ವರ್ಯಾಗೆ ಗೌತಮಿ ಜಾಧವ್, ಭವ್ಯಾ ಗೌಡ ಅವರು ಸಮಾಧಾನ ಮಾಡಿದ್ದಾರೆ. ‘ನಮ್ಮ ಮನೆಯ ಕೆಲಸದವರಿಗೂ ನಾನು ಈ ರೀತಿ ಮಾತುಗಳನ್ನು ಹೇಳಲ್ಲ’ ಎಂದು ಐಶ್ವರ್ಯಾ ಅವರು ಕಣ್ಣೀರು ಸುರಿಸಿದ್ದಾರೆ. ಐಶ್ವರ್ಯಾಗೆ ಮಾತುಗಳಿಂದ ನೋವುಂಟು ಮಾಡಿದ್ದು ಯಾರು ಎಂಬುದು ಅಕ್ಟೋಬರ್ 3ರ ಸಂಚಿಕೆಯಲ್ಲಿ ತಿಳಿಯಲಿದೆ.