ಚುರುಮುರಿ ವ್ಯಾಪಾರಿಯೊಬ್ಬರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ ಚುನಾವಣಾ ಖರ್ಚಿಗೆ ಹಣ ನೀಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ಅಂಗಡಿಯ ವ್ಯಾಪಾರಿ ಲೋಕೇಶ್ ಬಾಬು ಎಂಬುವವರು ಎಲೆ-ಅಡಿಕೆ-ಬಾಳೆಹಣ್ಣುಗಳ ತಾಂಬೂಲದಲ್ಲಿ 25 ಸಾವಿರ ಹಣ ಇಟ್ಟು ಕೊಟ್ಟಿದ್ದಾರೆ. ಇಂದು ಪ್ರಚಾರಕ್ಕೆಂದು ಹೋದಾಗ ಲೊಕೇಶ್, ತನ್ನ ನೆಚ್ಚಿನ ನಾಯಕನಿಗೆ ಹಣ ನೀಡಿದ್ದಾರೆ.