Chikkamagaluru: ಕೆಎಸ್​ಆರ್​ಟಿಸಿ ಬಸ್​ ಮೇಲೆ ಮದ್ಯದ ಬಾಟಲಿ ಎಸೆತ; ಪ್ರಶ್ನಿಸಿದ ಚಾಲಕನ ಮೇಲೆ ಯುವಕರಿಂದ ಹಲ್ಲೆ

ಮದ್ಯ ಸೇವಿಸಿದ್ದ ಯುವಕರು ಕೆಎಸ್​ಆರ್​ಟಿಸಿ ಬಸ್ ಮೇಲೆ ಬಾಟಲಿ ಎಸೆದು ಪುಂಡಾಟ ಮೆರೆದಿದ್ದಲ್ಲದೆ ಪ್ರಶ್ನಿಸಿದ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ‌ಹೋರಿತಿಮ್ಮನಹಳ್ಳಿಯಲ್ಲಿ ನಡೆದಿದೆ. ನಿನ್ನೆ ಸಂಜೆ ನಡೆದಿದ್ದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.