Mys Hamsalekha 06

ಫಿಲಂ ಸಿಟಿ ನಿರ್ಮಾಣ ಎಂಬುದು ಚಿತ್ರರಂಗದ ಹಲವು ವರ್ಷಗಳ ಬೇಡಿಕೆ. ಸುಸಜ್ಜಿತವಾದ, ಆಧುನಿಕ ತಂತ್ರಜ್ಞಾನವುಳ್ಳ ಫಿಲಂ ಸಿಟಿ ನಿರ್ಮಾಣ ಆಗಬೇಕು ಎಂದು ಚಿತ್ರರಂಗ ಹಲವು ವರ್ಷಗಳಿಂದಲೂ ಸರ್ಕಾರಗಳ ಬಳಿ ಮನವಿ ಮಾಡುತ್ತಲೇ ಬಂದಿವೆ. ಮೈಸೂರಿನಲ್ಲಿ ಈಗಾಗಲೇ ಫಿಲಂ ಸಿಟಿ ನಿರ್ಮಾಣಕ್ಕೆ ಸ್ಥಳ ಗೊತ್ತು ಪಡಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಸಂಗೀತ ನಿರ್ದೇಶಕ, ಚಿತ್ರಸಾಹಿತಿ ಹಂಸಲೇಖ, ಮೈಸೂರಿನಲ್ಲೇ ಫಿಲಂ ಸಿಟಿ ಏಕೆ ನಿರ್ಮಾಣ ಆಗಬೇಕು? ಎಂಬ ಬಗ್ಗೆ ವಿವರಿಸಿದ್ದಾರೆ.