ಭಾರವಾದ ಹೃದಯ ಹೊತ್ತು ಬಿಗ್​ಬಾಸ್​ಗೆ ಮರಳಿದ ಸುದೀಪ್, ತಾಯಿಗೆ ಅಶ್ರುತರ್ಪಣ

ಬಿಗ್​ಬಾಸ್ ವೇದಿಕೆ ಮೇಲಿದ್ದಾಗಲೇ ಸುದೀಪ್​ರ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಆ ನಂತರ ಅವರು ಮರಳಲಿಲ್ಲ. ತಾಯಿ ನಿಧನವಾದ ನೋವಿನಲ್ಲಿಯೇ ಸುದೀಪ್ ಬಿಗ್​ಬಾಸ್​ ವೇದಿಕೆಗೆ ಮರಳಿದ್ದಾರೆ. ಬಿಗ್​ಬಾಸ್​ ಕಡೆಯಿಂದ ಸುದೀಪ್ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.