ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಕೇಸ್ನಲ್ಲಿ ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮುಂತಾದವರ ಪೊಲೀಸ್ ಕಸ್ಟಡಿ ಮುಂದುವರಿದಿದೆ. ಹತ್ಯೆಗೆ ಸಂಬಂಧಿಸಿದ ಎಲ್ಲ ಸ್ಥಳಗಳಿಗೆ ತೆರಳಿ ಪೊಲೀಸರು ಮಹಜರು ಮಾಡುತ್ತಿದ್ದಾರೆ. ದರ್ಶನ್ ಮತ್ತು ಗ್ಯಾಂಗ್ ಪಾರ್ಟಿ ಮಾಡಿದ ಪಬ್ಗೂ ಕರೆದುಕೊಂಡು ಹೋಗಿ ಮಹಜರು ಮಾಡಲಾಗಿದೆ. ಇಂದು (ಜೂನ್ 17) ಮಹಜರು ಸಲುವಾಗಿ ಪೊಲೀಸ್ ವ್ಯಾನ್ ಹತ್ತಿದ ದರ್ಶನ್ ಮಂಕಾಗಿದ್ದು ಕಂಡುಬಂತು. ಅರೆಸ್ಟ್ ಆದ ಆರಂಭದಲ್ಲಿ ಗತ್ತು ತೋರಿಸುತ್ತಿದ್ದ ದರ್ಶನ್ ವರಸೆ ಈಗ ಬದಲಾಗಿದೆ ಎಂಬ ಮಾಹಿತಿ ಇದೆ. 2ನೇ ಬಾರಿಗೆ ಪೊಲೀಸ್ ಕಸ್ಟಡಿ ಮುಂದುವರಿದ ಬಳಿಕ ತನಿಖೆಯ ರೀತಿ ಬದಲಾಗಿದೆ. ಪೊಲೀಸ್ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಕ್ಕೆ ದರ್ಶನ್ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಲವು ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಆ ಎಲ್ಲ ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಪ್ರಶ್ನೆ ಕೇಳಿದಾಗ ‘ನನ್ನಿಂದ ತಪ್ಪಾಗಿದೆ. ಬಿಟ್ಟು ಬಿಡಿ’ ಎಂದು ದರ್ಶನ್ ಹೇಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.