ಹಾಸನಾಂಬೆ ದೇವಸ್ಥಾನದಲ್ಲಿ ಹಣ ಎಣಿಕೆ ಕಾರ್ಯ

ಭಕ್ತರು ಹುಂಡಿಗಳಲ್ಲಿ ನಗದು ಅಲ್ಲದೆ, ಚಿನ್ನ, ಬೆಳ್ಳಿ ಆಭರಣಗಳನ್ನೂ ಹಾಕಿದ್ದು ಅವುಗಳನ್ನು ವಿಂಗಡಣೆ ಮಾಡುವ ಕೆಲಸದಲ್ಲಿ ಸಿಬ್ಬಂದಿ ನಿರತರಾಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಹಣ ಎಣಿಕೆ ಕಾರ್ಯಕ್ಕೆ ಬ್ಯಾಂಕ್ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗಿದೆಯಂತೆ. ಟೇಬಲ್ ಗಳ ಮೇಲೆ ಹಣ ಎಣಿಸುವ ಯಂತ್ರಗಳನ್ನು ಇಟ್ಟಿರುವುದು ಕಾಣುತ್ತದೆ.