ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: ರೇವಣ್ಣ ನಿವಾಸದಲ್ಲಿ SIT ಶೋಧ

ರೇವಣ್ಣ ನಿವಾಸದಲ್ಲಿ ಎಸ್​ಐಟಿ ಪರಿಶೀಲನೆ ನಡೆದಿದೆ. ರೇವಣ್ಣ ನಿವಾಸಕ್ಕೆ ಇಬ್ಬರು ಸಂತ್ರಸ್ತೆಯರನ್ನ ಕರೆತಂದು ಮಹಜರು ನಡೆಸಲಾಯ್ತು. ಹೊಳೆನರಸೀಪುರದ ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತೆ, ಹಾಸನದ ಎಂಪಿ ನಿವಾಸದ ಕಿರುಕುಳ ಸಂತ್ರಸ್ತೆ ಕರೆತಂದು ಮಹಜರು ಮಾಡಲಾಯ್ತು. ಸಂತ್ರಸ್ತೆಯರ ಮಾಹಿತಿಯಂತೆ ಬೆಡ್ ರೂಮ್​, ಸ್ಟೋರ್ ರೂಂ, ಅಡುಗೆ ಮನೆ ಒಳಗೆ ಮಹಜರು ಮಾಡಿ ಮಾಹಿತಿ ಕಲೆ ಹಾಕಲಾಗಿದೆ. ಎಲ್ಲಾ ಪ್ರಕ್ರಿಯೆ ವಿಡಿಯೋ ರೆಕಾರ್ಡ್ ಮಾಡಲಾಗಿದೆ.