‘ಬಾನ ದಾರಿಯಲ್ಲಿ’ ಚಿತ್ರದ ಕೀನ್ಯಾದ ಶೂಟಿಂಗ್ ಎಷ್ಟು ಕಷ್ಟವಾಗಿತ್ತು ಎಂಬುದನ್ನು ವಿವರಿಸಿದ ಗಣೇಶ್

ನಟ ಗಣೇಶ್ ಅವರು ‘ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರದ ವೇದಿಕೆ ಮೇಲೆ ಗಣೇಶ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಶೂಟಿಂಗ್ ಕೀನ್ಯಾದಲ್ಲೂ ನಡೆದಿದೆ. ಅಲ್ಲಿ ಶೂಟಿಂಗ್ ದಿನಗಳು ಹೇಗಿತ್ತು ಎಂಬುದನ್ನು ಗಣೇಶ್ ವಿವರಿಸಿದ್ದಾರೆ. ‘ಕೆಲವೇ ದಿನಗಳು ಶೂಟ್ ಮಾಡಲು ಕೀನ್ಯಾದಲ್ಲಿ ಒಪ್ಪಿಗೆ ಇತ್ತು. ಆದರೆ, ಚಿತ್ರೀಕರಣ ಮಾಡಬೇಕಿದ್ದ ಅವಧಿ ಹೆಚ್ಚಿತ್ತು. ಒಪ್ಪಿಗೆ ತೆಗೆದುಕೊಂಡ ಜಾಗ ಬಿಟ್ಟು ಆಚೀಚೆ ಹೋಗಬಾರದಿತ್ತು. ನಮ್ಮ ಛಾಯಾಗ್ರಾಹಕ ಅಭಿ ಅವರು ಪ್ಯಾಕ್ಅಪ್ ಆದ ಬಳಿಕವೂ ಮರುದಿನದ ತಯಾರಿ ಮಾಡಿಕೊಳ್ಳುತ್ತಿದ್ದರು’ ಎಂದಿದ್ದಾರೆ ಗಣೇಶ್.