ಬಿಗ್ ಬಾಸ್ ಮನೆಯಲ್ಲಿ ಹೊಸ ನಿಯಮ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಸೊಂಟಪಟ್ಟಿ ಕಟ್ಟಿಕೊಂಡು ಜೋಡಿಯಾಗಿಯೇ ಇರಬೇಕು. ಶೌಚಾಲಯಕ್ಕೆ ತೆರಳುವಾಗ ಮತ್ತು ರಾತ್ರಿ ನಿದ್ರೆ ಮಾಡುವಾಗ ಹೊರತುಪಡಿಸಿ ಇನ್ನುಳಿದ ಎಲ್ಲ ಸಂದರ್ಭದಲ್ಲೂ ಜೋಡಿಯಾಗಿ ಇರಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಈ ನಿಯಮದಿಂದಾಗಿ ದೊಡ್ಮನೆಯ ಸದಸ್ಯರಿಗೆ ತಲೆಬಿಸಿ ಹೆಚ್ಚಾಗಿದೆ.