2023ರಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ರಮ್ಯಾ ಅವರ ದೃಶ್ಯಗಳನ್ನು ಬಳಸಿಕೊಂಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಕೇವಲ ಪ್ರೋಮೋಗಾಗಿ ರಮ್ಯಾ ಅನುಮತಿ ನೀಡಿದ್ದರು. ಆದರೆ ಟ್ರೇಲರ್ ಮತ್ತು ಸಿನಿಮಾದಲ್ಲಿ ಕೂಡ ದೃಶ್ಯಗಳನ್ನು ಬಳಸಿದ್ದಕ್ಕಾಗಿ ಚಿತ್ರತಂಡದ ವಿರುದ್ಧ ರಮ್ಯಾ ಕೇಸ್ ಹಾಕಿದ್ದರು. ಅದರ ವಿಚಾರಣೆ ಈಗ ನಡೆಯುತ್ತಿದೆ.