ಕನ್ನಡದ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನರಾಗಿದ್ದು ನೋವಿನ ಸಂಗತಿ. ಹೃದಯಾಘಾತದಿಂದ ಕೊನೆಯುಸಿರು ಎಳೆದ ಅವರ ಬಗ್ಗೆ ಈಗ ಒಂದು ವಿಚಾರ ಬಹಿರಂಗ ಆಗಿದೆ. ಸಿನಿಮಾ ರಂಗದ ಬಗ್ಗೆ ಸ್ಪಂದನಾ ವಿಜಯ್ ರಾಘವೇಂದ್ರ ಅವರು ಒಂದು ದೊಡ್ಡ ಕನಸು ಕಂಡಿದ್ದರು. ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಅವರ ಕನಸಾಗಿತ್ತು. ಈ ಮೂಲಕ ಅನೇಕರಿಗೆ ಅವಕಾಶಗಳನ್ನು ನೀಡಬೇಕು ಎಂದು ಅವರು ಆಲೋಚಿಸಿದ್ದರು. ಪಾರ್ವತಮ್ಮ ರಾಜ್ಕುಮಾರ್ ರೀತಿಯೇ ತಾವು ಕೂಡ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆ ಸ್ಪಂದನಾ ಅವರಿಗೆ ಇತ್ತು. ಅದನ್ನು ಅವರು ಡೈರಿಯಲ್ಲಿ ಬರೆದಿದ್ದರು ಎಂದು ಮಾವ ಪಿತಾಂಬರ ಹೇರಾಜೆ ತಿಳಿಸಿದ್ದಾರೆ. ಆಗಸ್ಟ್ 16ರಂದು ಸ್ಪಂದನಾ ವಿಜಯ್ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆಯಲಿದೆ. ಅದಕ್ಕಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಕಲ ಸಿದ್ಧತೆ ನಡೆದಿದೆ.