ಕಳೆದ 22 ವರ್ಷಗಳಿಂದ ತನ್ನ ವಿರುದ್ಧ ಯಾವುದೇ ಪ್ರಕರಣವಿಲ್ಲ, ರಿಕ್ಕಿಯ ಪ್ರಕರಣದಲ್ಲಿ ತನ್ನನ್ನು ಸಿಕ್ಕಿಸುವ ಪ್ರಯತ್ನ ಫ್ರಾನ್ಸಿಸ್ ಮಾಡುತ್ತಿದ್ದಾನೆ, ಸರಕಾರ ತನಗೆ ಇಬ್ಬರು ಪೊಲೀಸರ ರಕ್ಷಣೆ ನೀಡಿದೆ, ಅದನ್ನು ತೆಗೆಸುವ ಪ್ರಯತ್ನ ನಡೆದಿದೆ, ತನ್ನ ವಿರುದ್ಧ ದೂರು ನೀಡಿರೋದು ಇದೇ ಕಾರಣಕ್ಕೆ, ಆದರೆ ತಾನು ಯಾವುದರಲ್ಲೂ ಶಾಮೀಲಾಗಿಲ್ಲ ಎಂದು ಪೊಲೀಸರಿಗೆ ಮನವರಿಕೆಯಾಗಿದೆ ಎಂದು ಮಲ್ಲಿ ಹೇಳಿದರು.